Monday, 6 February 2017

ನಮ್ಮ ಮನೆ

ನಮ್ಮ ಮನೆಯ ಮುಂದೆ ಒಂದು ಗಿಡವು ಬೆಳೆಯಿತು
ಗಿಡವು ಬೆಳೆದು ಮರವಾಗಿ ಹೂವು ಬಿಟ್ಟಿತು
ಹೂವು ಎಲ್ಲ ಹಣ್ಣು ಆಗಿ ಕೆಳಗೆ ಬಿದ್ದಿತು
ಕೆಳಗೆ ಬಿದ್ದ ಹಣ್ಣು ತಿಂದು ಹೊಟ್ಟೆ ಕೆಟ್ಟಿತು
ಹೊಟ್ಟೆ ಕೆಟ್ಟ ಕಾರಣಕ್ಕೆ ಮರವ ಕಡಿದರು
ಮರವ ಕಡಿದಮೇಲೆ ಅದರ ಸೌದೆ ಸುಟ್ತರು
ಸೌದೆ ಸುಟ್ಟ ಹೊಗೆಗೆ ಎಲ್ಲ ಕಣ್ಣು ಉರಿಯಿತು
ಕೆಮ್ಮು ಬಂದು ಆಸುಪತ್ರೆ ಪಾಲು ಆದೆವು
ಲೋಕವೆಲ್ಲ ಬೆಚ್ಚಗಾದ ಸುದ್ದಿ ಕೇಳಿತು
ನೀರು ಮಟ್ಟ ಸಗರದಲ್ಲಿ ಹೆಚ್ಚು ಆಗಿತ್ತು
ಇದನು ಕೇಳಿ ಮನೆಯಲೆಲ್ಲ ಎಚ್ಚರಾದರು
ಮನೆಯ ಮುಂದೆ ಚಿಕ್ಕದೊಂದು ಗಿಡವ ನೆಟ್ಟರು
ಗಿಡವು ಬೆಳೆದು ಮರವಾಗಿ ಹೂವು ಬಿಟ್ಟಿದೆ
ಘಮ್ಮನೆಂದು ವಾಸನೆಯನು ಹರಡಿಸುತ್ತಿದೆ
ಹಕ್ಕಿಗಳಿಗೆ ಮನೆಯು ಹೌದು ನಮ್ಮ ಈ ಮರ
ನಮ್ಮ ಉಸಿರು ಕೂಡ ಹೌದು ನಮ್ಮ ಈ ಮರ
ದಿನವು ಎದ್ದು ನೀರು ಹಾಕಿ ಇನ್ನೂ ಬೆಳೆಸುವ
ಗಿಡಮರಗಳ ಸಾಲು ಬೆಳೆಸಿ ನಾಡು ಉಳಿಸುವ
ನಾಡು ಸರಿಯೆ, ದೇಶ ಸರಿಯೆ, ಭೂಮಿ ಉಳಿಸುವ
ಪರಿಸರವನು ಚೆನ್ನ ಮಾಡಿ ನಾಳೆ ಉಳಿಸುವ

- Gaggy

No comments: